ಬೇಸಿಗೆಯ ಆರಂಭದಲ್ಲೇ ಬರಿದಾದ ಮಲಪ್ರಭಾ ನದಿ!ತಾಲೂಕಿನ ಕಣಕುಂಬಿ ಗ್ರಾಮದ ಬಳಿ ಹುಟ್ಟಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಹರಿದು ನವಿಲುತೀರ್ಥದಲ್ಲಿ ಸಂಗ್ರಹಗೊಂಡು ಮುಂದೆ ಕೃಷ್ಣೆಯನ್ನು ಸಂಗಮಿಸಲು ಕೂಡಲ ಸಂಗಮದತ್ತ ಧಾವಿಸುವ ಮಲಪ್ರಭಾ ನದಿ 4 ಜಿಲ್ಲೆಗಳ ನೂರಾರು ಊರುಗಳ ಜನ, ಜಾನುವಾರುಗಳ ದಾಹ ನೀಗಿಸುವ ಮಹತ್ಕಾರ್ಯ ಕೈಗೊಂಡಿದೆ.