ಸ್ವಾಭಿಮಾನಿ, ವಸ್ತುನಿಷ್ಠ ಬರಹಗಾರ ಇಟ್ನಾಳಮಠಕಳೆದ 3 ದಶಕಗಳ ಕಾಲ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠರು ಸ್ವಾಭಿಮಾನಿ ಮತ್ತು ವಸ್ತುನಿಷ್ಠ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ ಕಂಬನಿ ಮಿಡಿದರು.