ಬಯಲಾಟಗಳ ಕಲೆ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅನಿವಾರ್ಯಬಯಲಾಟವು ಮನರಂಜನೆಯೊಂದಿಗೆ ಬದುಕಿನ ವಿವೇಕ, ನೈತಿಕತೆ, ಸೌಹಾರ್ದ ಮನೋಭಾವ, ಕೂಡುಬಾಳ್ವೆ ಮುಂತಾದ ಮೌಲ್ಯಗಳನ್ನು ಪ್ರಸಾರ ಮಾಡುತ್ತ ಬಂದಿದ್ದು, ಗ್ರಾಮೀಣ ಪ್ರದೇಶದ ಎಲ್ಲ ಜಾತಿ, ಧರ್ಮಗಳ ಜನ ಸೇರಿ ಈ ಕಲೆಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಬಯಲಾಟ ಜಾತ್ಯಾತೀತ ಕಲೆಯಾಗಿ ಬೆಳೆದಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ ಹೇಳಿದರು.