ಶಿವಾಜಿಯ ಹೋರಾಟಗಳು ಯುವಕರಿಗೆ ಮಾದರಿಛತ್ರಪತಿ ಶಿವಾಜಿ ಮಹಾರಾಜರ ಸಾಮಾಜಿಕ ಹಾಗೂ ನ್ಯಾಯ ಸಮ್ಮತದ ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಶಿವಾಜಿ ಮಹಾರಾಜರ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕನ್ನು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆಯ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯ ಮೂಡಿಸಿದೆ.