ರಾಷ್ಟ್ರೀಯ ಮಹಾಮಂಡಳಕ್ಕೆ ನಿರ್ದೇಶಕರಾಗಿ ಅಮಿತ ಕೋರೆ ಆಯ್ಕೆ ಫೆ.15 ರಂದು ದೆಹಲಿಯಲ್ಲಿ ಜರುಗಿದ ಚುನಾವಣೆಯಲ್ಲಿ ಕರ್ನಾಟಕದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಅಮಿತ ಪ್ರಭಾಕರ ಕೋರೆ ಆಯ್ಕೆಯಾದರು. ಈ ಕುರಿತು ಮಹಾಮಂಡಳಿಯ ಚುನಾವಣಾ ಅಧಿಕಾರಿ ಮೇಕಲಾ ಚೈತನ್ಯ ಪ್ರಸಾದ ಇವರು ಫೆ. 15 ರಂದು ಜರುಗಿದ ಮಹಾಮಂಡಳಿಯ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.