ಮತದಾನ ದೇಶದ ನಾಗರಿಕರ ಕರ್ತವ್ಯ: ಇಒ ಕಮ್ಮಾರಚಿಕ್ಕೋಡಿ: ಚುನಾವಣೆಯ ಪರ್ವ, ದೇಶದ ಗರ್ವ ಘೋಷವಾಕ್ಯದೊಂದಿಗೆ ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರಿಗೆ ಮತದಾನ ಹಕ್ಕಿದೆ ಎಂದು ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಜಗದೀಶ ಕಮ್ಮಾರ ತಿಳಿಸಿದರು. ತಾಲೂಕ ಪಂಚಾಯತ ಸಭಾಭವನದಲ್ಲಿ ಬ್ಯಾಂಕ್ ಬಿಎಲ್‌ಬಿಸಿ ಸಭೆ ಹಾಗೂ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರಿಗೆ ಗಟ್ಟಿ ಓದು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹ ಪರಿಣಾಮ ಬಿರುವ ನಾಗರಿಕ ಕರ್ತವ್ಯವಾಗಿದೆ ಎಂದರು.