ನಿಗಮ ಮಂಡಳಿಯಲ್ಲಿ ಶಾಸಕರಾದ ಶಿವಾನಂದ ಕೌಜಲಗಿ, ರಾಜು ಕಾಗೆ ಮಣೆಬೆಳಗಾವಿ: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕೊನೆಗೂ ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಿರಿಯ ಶಾಸಕರಿಗೆ ನೀಡಲಾಗಿದ್ದು,ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಕರ್ನಾಟಕ ಹಣಕಾಸು ನಿಗಮ ಸಿಕ್ಕಿದೆ. ಕೌಜಲಗಿ ಕಾಂಗ್ರೆಸ್‌ನ ಹಿರಿಯ ಶಾಸಕರಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಆದರೆ, ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಲಿಲ್ಲ. ಸದ್ಯ ನಿಗಮ ಮಂಡಳಿಗೆ ಅವರನ್ನು ಪರಿಗಣಿಸಲಾಗಿದೆ.