ಪುಟಾಣಿಗಳ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಜೀವ ಗಣಪದೊಡ್ಡಬಳ್ಳಾಪುರ: ಇದೊಂದು ವಿನೂತನ ಕಾರ್ಯಕ್ರಮ, ಮಕ್ಕಳಲ್ಲಿ ಹಬ್ಬ ಹರಿದಿನಗಳು, ಧಾರ್ಮಿಕ ಆಲೋಚನೆಗಳ ಅರಿವಿನೊಂದಿಗೆ ಪರಿಸರದ ಜಾಗೃತಿ ಮೂಡಿಸುವ ಪ್ರಯತ್ನ ಅಲ್ಲಿ ಯಶಸ್ವಿಯಾಗಿ ನಡೆದಿತ್ತು. ನೆರೆದಿದ್ದ ಮಕ್ಕಳಲ್ಲಿ ದೇಸಿ ಸೊಗಡಿನ ಕಲಾತ್ಮಕ ಬೆರಗುಗಳು ರೋಮಾಂಚನ ಮೂಡಿಸಿದರೆ, ಹಿರಿಯರಲ್ಲಿ ಹೊಸ ಪೀಳಿಗೆಗೆ ತಾವು ನೀಡುತ್ತಿರುವ ಮಾರ್ಗದರ್ಶನದ ಬಗ್ಗೆ ಹಮ್ಮು ಮನೆಮಾಡಿತ್ತು.