ಕಡಲೆಕಾಯಿ ಪರಿಷೆ ಜಾಗ ಜೈನಧಾಮಕ್ಕೆ ಕೇಳಿಲ್ಲ: ಸ್ಪಷ್ಟನೆದೇವನಹಳ್ಳಿ: ಇಲ್ಲಿನ ಪ್ರಸಿದ್ಧ ಪಾರಿವಾಳ ಗುಟ್ಟದಲ್ಲಿ ಸಿದ್ದಾಚಲ ಸ್ಥೂಲಧಾಮಕ್ಕೆ ಸರ್ಕಾರ ಜಾಗ ಮಂಜೂರು ಮಾಡಿದೆ. ದೇವಾಲಯಕ್ಕೆ ತೆರಳಲು ರಸ್ತೆಗೆ ಜಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆಯೇ ಹೊರತು ನಾವು ಕಡಲೆಕಾಯಿ ಪರಿಷೆ ನಡೆಯುವ ಜಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿಲ್ಲ ಎಂದು ಶ್ರೀ ಸಿದ್ದಾಚಲ ಸ್ಥೂಲಭದ್ರ ಧಾಮದ ಸ್ಥಾಪಕ ಆಚಾರ್ಯ ಚಂದ್ರ ಯಶ್ ಸೂರೀಶ್ವರ್‌ಜಿ ತಿಳಿಸಿದ್ದಾರೆ.