ಸ್ನೇಹಿತನನ್ನೇ ಕೊಂದು, ಸುಟ್ಟು, ಕೆರೆಗೆ ಎಸೆದಿದ್ದ ಕಟುಕ!ದೊಡ್ಡಬಳ್ಳಾಪುರ: ಆ ಕಟುಕ ಚೀಟಿ ಹಣ ಕೊಡುವುದಾಗಿ ನಂಬಿಸಿ ಕರೆದೊಯ್ದ ಸ್ನೇಹಿತನೇ ಆತನ ಗೆಳೆಯನನ್ನು ಕೊಲೆ ಮಾಡಿ, ದೇಹವನ್ನು ಹೂತು, ಬಳಿಕ ಹೂತಿಟ್ಟ ಶವ ತೆಗೆದು ಸುಟ್ಟು, ಅವಶೇಷಗಳನ್ನು ಕೆರೆಗೆ ಎಸೆದಿದ್ದ. ಬಳಿಕ ಪ್ರಕರಣಕ್ಕೆ ಸಾಕ್ಷ್ಯ ಇಲ್ಲದಂತೆ ಮಾಡಲು, ಮೃತ ವ್ಯಕ್ತಿ ಕಾಣೆಯಾದ ಬಗ್ಗೆ ನಾಟಕ ಸೃಷ್ಟಿಸಿ ಕುಟುಂಬದೊಂದಿಗೆ ಕನಿಕರದಿಂದಿದ್ದ ದುಷ್ಟನ ನಿಜಬಣ್ಣ ಬಯಲಾಗಿದೆ.