ಯೋಜನೆಗಳ ವೈಫಲ್ಯಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸಂವಿಧಾನ ಸಾಥಿ ಸಹಯೋಗದಲ್ಲಿ ವಿಶ್ವ ಜಲದಿನದ ಅಂಗವಾಗಿ ವೈದ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರಿನ ಮರುಬಳಕೆಯ ಸಾಧಕ-ಬಾಧಕಗಳ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ಹಾಗೂ ಭವಿಷ್ಯದ ನೀರಿನ ಸ್ಥಿತಿಗತಿಗಳ ಕುರಿತಾಗಿ ಸಂವಾದ ಆಯೋಜಿಸಲಾಗಿತ್ತು.