ಕ್ಯಾನ್ಸರ್ ಮಾರಣಾಂತಿಕವಲ್ಲ: ನಿರ್ಲಕ್ಷ್ಯ ಸಲ್ಲದುದೊಡ್ಡಬಳ್ಳಾಪುರ: ಭಾರತದಲ್ಲಿ 4 ನಿಮಿಷಕ್ಕೆ ಒಂದು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದ್ದು, 8 ನಿಮಿಷಕ್ಕೊಬ್ಬರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವುದು ಕಂಡು ಬಂದಿದೆ. ಕ್ಯಾನ್ಸರ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಂಡರೆ ಗುಣಪಡಿಸಲು ಸಾಧ್ಯವಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯ ಡಾ.ಕೆ.ಎನ್.ಲೋಕೇಶ್ ತಿಳಿಸಿದರು.