ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ.
ವೆಂಕಟೇಶ್ವರ ದೇಗುಲದಲ್ಲಿ ಲಾಡು ಪ್ರಸಾದವನ್ನು ತಯಾರಿಸಲು ಕೆಎಂಎಫ್ ಕಳುಹಿಸಿದ್ದ ಒಂದು ಲಾರಿ ನಂದಿನಿ ತುಪ್ಪವನ್ನು ಟಿಟಿಡಿ ಅಧಿಕಾರಿಗಳು ಬುಧವಾರ ತಮ್ಮ ತಿರುಪತಿಯಲ್ಲಿನ ಉಗ್ರಾಣದಲ್ಲಿ ಪೂಜೆ ಮಾಡಿ ಸ್ವಾಗತಿಸಿದರು.
ಹಬ್ಬ ಹಾಗೂ ರಜಾ ದಿನಗಳಂದು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದ್ದು, ಅದರ ಲಾಭ ಪಡೆಯಲು ಖಾಸಗಿ ಬಸ್ ಮಾಲೀಕರು ಮಾಮೂಲಿ ದಿನಗಳಿಗಿಂತ ಎರಡು ಪಟ್ಟು ಹೆಚ್ಚಿನ ದರವನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್‌ಡಬ್ಲ್ಯುಡಿಎ) ಕಂಪನಿ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ ‘ಎಫ್‌ಡಬ್ಲ್ಯುಡಿ200ಬಿ’ ಮಾನವರಹಿತ ಬಾಂಬರ್ ವಿಮಾನವು ತನ್ನ ಮೊದಲ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.