ಮರ ಬಿದ್ದು ಈವರೆಗೆ 18 ಮಂದಿಗೆ ಹಾನಿ: ಪರಿಹಾರಕ್ಕೆ 10 ಕೋಟಿ ವೆಚ್ಚರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದು ಈವರೆಗೆ ಇಬ್ಬರು ಮೃತಪಟ್ಟಿದ್ದು, 16 ಮಂದಿಗೆ ಗಾಯಗಳಾಗಿವೆ. ನಗರದಲ್ಲಿ ಪೂರ್ವ ಮುಂಗಾರು ಆರಂಭಗೊಂಡ ಮಾರ್ಚ್‌ನಿಂದ ಈವರೆಗೆ ಬರೋಬ್ಬರಿ 1,233 ಮರಗಳು ಸಂಪೂರ್ಣವಾಗಿ ಧರೆಗುರುಳಿದ್ದು, 3,308 ರಂಬೆ ಕೊಂಬೆಗಳು ಧರೆಗುರುಳಿವೆ. ಮಳೆ-ಗಾಳಿ ಇಲ್ಲದ ಸಂದರ್ಭದಲ್ಲಿಯೂ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ಉದಾಹರಣೆಯೂ ಇದೆ.