ಶೈಕ್ಷಣಿಕ ಪ್ರಗತಿ ಸಂಘಟನೆಗಳ ಆದ್ಯತೆಯಾಗಲಿದೊಡ್ಡಬಳ್ಳಾಪುರ: ವಿದ್ಯಾವಂತ ಸಮಾಜ ದೇಶದ ಪ್ರಗತಿಗೆ ಪೂರಕವಾಗಿದ್ದು, ಶೈಕ್ಷಣಿಕ ಪ್ರಗತಿ ಎಲ್ಲ ಸಂಘಟನೆಗಳ ಆದ್ಯತೆಯಾಗಬೇಕು. ಸ್ವಾತಂತ್ರ್ಯವನ್ನು ಸ್ವಹಿತಕ್ಕೆ ಬಳಸಿಕೊಳ್ಳುವುದು ತಪ್ಪು. ನಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುವ ಮೂಲಕ ದೇಶದ ಏಳಿಗೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಮುಖ್ಯ ಶಿಕ್ಷಕಿ ಲಕ್ಷ್ಮಮ್ಮ ತಿಳಿಸಿದರು.