ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸೆ.22ರಂದು ನಡೆಯುವ ಪರೀಕ್ಷೆಗೆ ಅಭ್ಯರ್ಥಿಗಳು ಕುರ್ತಾ, ಪೈಜಾಮಾ ಮತ್ತು ಜೀನ್ಸ್ ಪ್ಯಾಂಟ್ ಧರಿಸಿ ಬರುವುದನ್ನು ನಿರ್ಬಂಧಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರಳವಾದ ವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ.
ಇತ್ತೀಚೆಗೆ ದುಬಾರಿ ಮದ್ಯಗಳ ಬೆಲೆಯನ್ನು ಸರ್ಕಾರ ಕೊಂಚ ಕಡಿಮೆ ಮಾಡಿದ್ದರೂ ಮದ್ಯದಂಗಡಿಗಳಲ್ಲಿ ಸ್ಟಾಕ್ ಕೊರತೆ ಕಂಡುಬಂದಿದೆ. ಬೆಲೆ ಇಳಿಕೆಯಾಗಿದ್ದರಿಂದ ಲೇಬಲಿಂಗ್ ಮಾಡುವ ಕಾರ್ಯಕ್ಕೆ ಸಮಯಾವಕಾಶ ಬೇಕಿರುವುದು ಇದಕ್ಕೆ ಕಾರಣವಾಗಿದೆ.
ಸಂಸದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಅವರು ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ 'ಸರ್ಪ್ರೈಸ್' ಪರಿಶೀಲನೆ ನಡೆಸಿ, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದರು.