ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗಾಗಿ ಪಡೆದ ಶಕ್ತಿದೇವಿ ರೂಪವಿಜಯಪುರ: ಅಸುರರನ್ನು ಸಂಹರಿಸುವ ಮೂಲಕ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಶಕ್ತಿದೇವಿಯ ರೂಪಗಳನ್ನು ಪಡೆದ ಬಗ್ಗೆ ಪುರಾಣಗಳಲ್ಲಿದೆ. ಭಯ, ಶತ್ರು ನಿವಾರಣೆಯಾಗಿ ಅರಿಷಡ್ವರ್ಗಗಳು, ವಿವಿಧ ದುರ್ಗುಣಗಳನ್ನು ವರ್ಜಿಸಿ ಸದ್ಗುಣಗಳನ್ನು ರೂಢಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.