ನಗರದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಭಣಭಣ!ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಸಂಚಕಾರ ತರಬಾರದೆಂಬ ಉದ್ದೇಶದಿಂದ ಬ್ರಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಿಸಿದ್ದ ಬಹುಮಹಡಿ ಸ್ಮಾರ್ಟ್ ಪಾರ್ಕಿಂಗ್ ಕಟ್ಟಡ ಖಾಲಿ ಹೊಡೆಯುತ್ತಿದ್ದು, ಟೆಂಡರ್ ಪಡೆದುಕೊಂಡ ಸಂಸ್ಥೆ ಕಂಗಾಲಾಗಿದೆ.