ಶಾಲೆಗೊಂದು ಸೇವಾದಳ ಶಾಖೆ ಆರಂಭಿಸುವ ಗುರಿ: ಲಕ್ಷ್ಮೀಪತಿದೊಡ್ಡಬಳ್ಳಾಪುರ: ದೇಶ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ದೇಶಭಕ್ತಿ, ಸೇವಾ ಮನೋಭಾವ ಮೂಡಿಸಲು ಸಹಕಾರಿಯಾಗಿದ್ದು, ಭಾರತ ಸೇವಾದಳ ಸ್ಥಾಪನೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಶಾಲೆಗೊಂದು ಸೇವಾದಳ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಭಾರತ ಸೇವಾದಳ ಜಿ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.