ತಪ್ಪಾದ ವಲಯ ವರ್ಗೀಕರಣ ಆಸ್ತಿಗೆ ದುಪ್ಪಟ್ಟು ದಂಡ ಮನ್ನಾ: ಬಿಬಿಎಂಪಿ ಆದೇಶಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ವಿಧಿಸುತ್ತಿದ್ದ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಶೇ.6.75ರಷ್ಟು ಬ್ಯಾಂಕ್ ಚಾಲ್ತಿ ಬಡ್ಡಿ ದರ ಸಂಗ್ರಹಿಸಲು ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ.