ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೋ-ಬೇಡವೋ ಎಂದು ನಡೆಸಿದ್ದ ‘ಮೂರೂ ಪರೀಕ್ಷೆ’ಯಲ್ಲೂ ಪೀಣ್ಯ ಫ್ಲೈ ಓವರ್ ಉತ್ತಮ ಅಂಕಗಳಿಂದ ‘ಪಾಸ್’ ಆಗಿದೆ. ಇದರಿಂದಾಗಿ ಮೇಲ್ಸೇತುವೆಗೆ ಹಿಡಿದಿದ್ದ ಎರಡು ವರ್ಷದ ‘ಗ್ರಹಣ’ಕ್ಕೆ ಕೊನೆಗೂ ‘ಮುಕ್ತಿ’ ದೊರಕುವ ಸಮಯ ಸನಿಹವಾಗಿದೆ.
ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ಶ್ರಮಿಸಿದ್ದ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದರು.
ಬೆಂಗಳೂರಿಗೆ ಬರುತ್ತಿದ್ದ ಅಕಾಸಾ ಏರ್‌ಲೈನ್ಸ್ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯಲು ₹5 ಸಾವಿರ ಹೆಚ್ಚುವರಿಯಾಗಿ ಟಿಕೆಟ್ ವೆಚ್ಚ ಮಾಡಿದ್ದರೂ, ನಾಯಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂದು ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.