ಕೃಷಿಯೇತರ ಸಾಲ ಮನ್ನಾ, ಬಡ್ಡಿ ಪಾವತಿ ಗಡುವು ವಿಸ್ತರಿಸಿಹಿಂಗಾರು ಬೆಳೆ ಇನ್ನೂ ಕೈಗೆ ಬಂದಿಲ್ಲ, ನವೆಂಬರ್ನಲ್ಲಿಯೇ ಕಬ್ಬು ಕಾರ್ಖಾನೆಗೆ ಸಾಗಿಸಿದ್ದರೂ ಹಣ ಪಾವತಿಯಾಗಿಲ್ಲ. ಕೈಯಲ್ಲಿ ಕಾಸಿಲ್ಲ. ಇಂಥ ಸಂಕಷ್ಟದ ಸಂದರ್ಭದಲ್ಲಿ ಸಾಲ ಮರುಪಾವತಿ ಕಷ್ಟ. ಹೀಗಾಗಿ ರಾಜ್ಯ ಸರ್ಕಾರ ರೈತರ ಕೃಷಿಯೇತರ ಸಾಲದ (ಎಂ.ಟಿ ಸಾಲ) ಬಡ್ಡಿ ಮನ್ನಾದ ಯೋಜನೆಯ ಅವಧಿ ಎಪ್ರಿಲ್ ತಿಂಗಳಾಂತ್ಯದವರೆಗೆ ವಿಸ್ತರಿಸುವಂತೆ ಮುಖಂಡರು ಆಗ್ರಹಿಸಿದ್ದಾರೆ.