8 ದಿನದೊಳಗೆ ಪರಿಹಾರಕ್ಕೆ ಕ್ರಮ ವಹಿಸಿ: ಜಿಪಂ ಸಿಇಒಕಮಲನಗರ ತಾಲೂಕಿನ ಚಿಮ್ಮೇಗಾಂವ ಗ್ರಾಮದ ಹನುಮಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಗ್ರಾಮಸ್ತರಿಂದ ರಸ್ತೆ, ಸ್ವಚ್ಛತೆ, ನೀರಿನ ಸಮಸ್ಯೆಗಳ ದೂರು.ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಹೆಚ್ಚು ಅಧಿಕಾರ ನೀಡಿದ್ದು, ಸಮಸ್ಯೆಗಳನ್ನು ತ್ವರಿತವಾಗಿ ಪಿಡಿಒಗಳು ಬಗೆಹರಿಸಬೇಕು. ಸ್ವಚ್ಛತೆ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ಡಾ.ಗಿರೀಶ ಬದೋಲೆ ಸೂಚನೆ ನೀಡಿದರು.