ಪ್ರಕೃತಿ ವಿಕೋಪ ತಡೆಯಲು ಅರಣ್ಯ ಬೆಳೆಸಿ: ಸಚಿವ ಈಶ್ವರ ಖಂಡ್ರೆವಿಶ್ವದ ಅರ್ಧ ಜನಸಂಖ್ಯೆ ಪ್ರಕೃತಿ ವಿಕೋಪದಿಂದ ತತ್ತರಿಸಿದೆ. ತಾಪಮಾನ ಹೆಚ್ಚಳದಿಂದ ದೇಶದ ಉತ್ತರ ಭಾಗದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಇಂತಹ ಅನಾಹುತಗಳು ತಡೆಯಬೇಕಾದರೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ಸಸಿಗಳು ಬೆಳೆಸುವುದು ಅತಿ ಅವಶ್ಯಕವಾಗಿದೆ ಎಂದು ಬೀದರ್ನಲ್ಲಿ ಲಕ್ಷ ವೃಕ್ಷ ಅಭಿಯಾನದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.