ಮೀಸಲಾತಿ ಒದಗಿಸಿಕೊಟ್ಟ ಏಕೈಕ ನಾಯಕ ಅರಸುದೇವರಾಜ ಅರಸು ರಾಜಕೀಯ ಕ್ಷೇತ್ರದಲ್ಲಿ ದಿಟ್ಟತನದಿಂದ ರಾಜಕಾರಣ ಮಾಡಿದವರು. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಪುನರ್ ಜನ್ಮ ಕೊಟ್ಟವರು. ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ, ಅವರಂತಹ ಮೇರು ವ್ಯಕ್ತಿತ್ವವಿರುವ ನಾಯಕರನ್ನು ಚುನಾವಣೆಯಲ್ಲಿ ಜನತೆ ಆಯ್ಕೆಮಾಡುವ ಅಗತ್ಯವಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು