ತಂದೆಯ ಕ್ಷೇತ್ರದಲ್ಲಿ ಮಗ ಸುನಿಲ್ ಗೆ ಅಲ್ಪಮತದ ಲೀಡ್ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 1ನೇ ಸುತ್ತಿನಿಂದ 7 ನೇ ಸುತ್ತಿನ ತನಕವೂ ನಿರಂತರ ಮುನ್ನಡೆ ಹೊಂದಿದ್ದರು. ಅದಾದ ಬಳಿಕವೂ, ಸುನಿಲ್ ಬೋಸ್ 76,722 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಬಾಲರಾಜು 73,801 ಮತಗಳನ್ನು ಪಡೆದುಕೊಂಡು. 2921 ಮತಗಳ ಲೀಡ್ ಪಡೆದಿದ್ದಾರೆ. ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸುನಿಲ್ ಬೋಸ್ ಅವರಿಗೆ ತವರಿನಲ್ಲೇ ಅಲ್ಪ ಲೀಡ್ ಬಂದಿದ್ದು ಮುಜುಗರ ಅನುಭವಿಸಿದ್ದಾರೆ.