ಅರಣ್ಯ ಸಂಪತ್ತು ಉಳಿಸುವಲ್ಲಿ ಬದ್ಧತೆ ಇರಲಿಅಧಿಕಾರಿಗಳು ಕರ್ತವ್ಯ ನಿರ್ವಹಣೆ ವೇಳೆ ಶಿಸ್ತು, ತಾಳ್ಮೆ, ಬದ್ಧತೆ ಜೊತೆ ಪ್ರಾಮಾಣಿಕತೆ ಎಂಬುದು ಅತಿಮುಖ್ಯ. ಅಧಿಕಾರಿಗಳು, ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಹಾದಿಯಲ್ಲಿ ಪ್ರಾಮಾಣಿಕವಾಗಿ ಸಾಗಿ ಅರಣ್ಯ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಚಾಮರಾಜನಗರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದರು.