ಮಹದೇಶ್ವರ ಬೆಟ್ಟದಲ್ಲಿ 30 ದಿನಕ್ಕೆ 2.20 ರು. ಕೋಟಿ ಸಂಗ್ರಹಹುಂಡಿ ಹಣ ಸಂಗ್ರಹವಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಸ್ ನಿಲ್ದಾಣದ ಬಳಿ ಬರುವ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಹುಂಡಿಯಲ್ಲಿದ್ದ ಹಣವನ್ನು ತೆರೆದು ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಯಿತು.