ಮಾನಸಿಕ ರೋಗಿಗಳಿಗೆ ಪ್ರೀತಿಯ ಆರೈಕೆ ಅಗತ್ಯಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿ ಆಗಿಸಲು ಸಮುದಾಯ, ಕುಟುಂಬದ ಪ್ರೀತಿ, ವಿಶ್ವಾಸ, ಆರೈಕೆ, ಬೆಂಬಲ ಅವಶ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಬಿ.ಎಎಸ್. ಭಾರತಿ ಅವರು ಸಲಹೆ ನೀಡಿದರು.