ಪ್ರಸಾದ್ ಉನ್ನತ ಸ್ಥಾನಕ್ಕೇರಲು ಬದ್ಧತೆ ಕಾರಣನನ್ನ 40 ವರ್ಷ ಸಾರ್ವಜನಿಕ ಜೀವನದಲ್ಲಿ 1987ರಿಂದ ಅನೇಕ ಜನಪರ ಕೆಲಸ, ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರೂ ವಿ. ಶ್ರೀನಿವಾಸ ಪ್ರಸಾದ್ ಅವರು ಗಳಿಸಿದ ಹೆಸರನ್ನು ನಾನು ಗಳಿಸಲಾಗಲಿಲ್ಲ. ಬದುಕಿನ ಕೊನೆಯ ಪಯಣವೇ ಸಾವು, ಹಾಗಾಗಿ ಸಾವಿಗೂ ಮುನ್ನ ಅವರು ಮಾಡಿದ್ದ ಜನಪರ ಕಾರ್ಯಕ್ರಮ, ನಿಲುವು, ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ ಹೇಳಿದರು.