ಅನುಮಾನಾಸ್ಪದವಾಗಿ 10 ಕುರಿಗಳು ಸಾವು: ಆತಂಕತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಹತ್ತು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇನ್ನೂ ಮೂರು ಕುರಿಗಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮಹದೇವಮ್ಮ ಹಾಗೂ ದೇವಮ್ಮಗೆ ಸೇರಿದ ಹತ್ತು ಕುರಿಗಳು ವಿಷ ಪೂರಿತ ಸೊಪ್ಪು ಅಥವಾ ಬೀಜ ತಿಂದು ಸತ್ತಿರಬಹುದು ಎಂದು ಹೇಳಲಾಗುತ್ತಿದೆ.