ಲಿಂಗಾಯತ ಕನ್ನಡ ನಾಡಿನ ಪ್ರಥಮ ಧರ್ಮ: ಹಿರಿಯ ನ್ಯಾಯವಾದಿ ವಿರೂಪಾಕ್ಷ ಅಭಿಮತಲಿಂಗಾಯತವು ಈ ನೆಲದ, ಕನ್ನಡ ನಾಡಿನ ಪ್ರಥಮ ಧರ್ಮ. ಅದು ಸ್ವತಂತ್ರ ಧರ್ಮವಾಗಿದ್ದು, ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಸರ್ವಶ್ರೇಷ್ಠ ಧರ್ಮವೆನಿಸಿದೆ. ಇದಕ್ಕೆ ಬಸವಾದಿ ಶರಣರ ವಚನಗಳು ನಮಗೆ ದಾಖಲೆಯಾಗಿದೆ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ತಿಳಿಸಿದರು