ಔಷಧಿ ಅಕ್ರಮ ಮಾರಾಟ: ಕೃಷಿ ಇಲಾಖೆಯಿಂದ ತನಿಖೆಕೊಳ್ಳೇಗಾಲ ಕೃಷಿ ಇಲಾಖೆಯ ಕಸಬಾ ಗೋದಾಮಿನಲ್ಲಿ ಸರ್ಕಾರ, ಕೃಷಿ ಇಲಾಖೆ ವಿತರಿಸದ ಎಂ ಪವರ್ ಔಷಧಿ ಅಕ್ರಮ  ದಾಸ್ತಾನು ಪ್ರಕರಣ, ರೈತರಿಗೆ ನೀಡಬೇಕಾದ ಉಚಿತ ಔಷಧಿಯನ್ನು ನಿಯಮ ಉಲ್ಲಂಘಿಸಿ ಮಾರಾಟ ಮಾಡಿಕೊಂಡ ಹಾಗೂ ಪವರ್ ಟಿಲ್ಲರ್ ಇನ್ನಿತರೆ ಯಂತ್ರೋಪಕರಣ ವಿತರಣೆಯಲ್ಲಿ ಅವ್ಯವಹಾರ ಪ್ರಕರಣವನ್ನು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಳೆದ ಒಂದು ವಾರದಿಂದ  ಬಿರುಸಿನ ತನಿಖೆಯನ್ನು ರಮೇಶ್ ನೇತೃತ್ವದಲ್ಲಿ ನಡೆಸಿದ್ದಾರೆ.