ಬಾದಾಮಿ ಬನಶಂಕರಿಗೆ ತರೀಕೆರೆ ಭಕ್ತರಿಂದ ಪೀತಾಂಬರ ಸೀರೆ ಸಮರ್ಪಣೆತರೀಕೆರೆ, ದೇವಾಂಗ ಸಮಾಜದ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಕುಲಕಸುಬು ದ್ಯೋತಕವಾಗಿ ತರೀಕೆರೆಯ ಸಮಾಜ ಬಾಂಧವರು ಕುಲಕಸುಬಿನ ದ್ಯೋತಕವಾಗಿ ಮಡಿಯಿಂದ ನೇಯ್ದ ಪಿತಾಂಬರ ಸೀರೆಯನ್ನು ಹಂಪೆಯ ಶ್ರೀ ಹೆಮಕೂಟದ ಗಾಯತ್ರಿ ದೇವಸ್ಥಾನದಿಂದ ಶ್ರೀ ಪೀಠದ ಜಗದ್ಗುರು ದಯಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ಹೊತ್ತು ಪಾದಯಾತ್ರೆ ಮೂಲಕ ಬಾದಾಮಿ ಬನಶಂಕರಿದೇವಿಗೆ ಬನದ ಹುಣ್ಣಿಮೆಯ ಹಿಂದಿನ ದಿನ ಸಮರ್ಪಿಸಲಾಯಿತು ಎಂದು ದೇವಾಂಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಟಿ.ಆರ್.ಶ್ರೀಧರ್ ತಿಳಿಸಿದ್ದಾರೆ.