ಅಂಗನವಾಡಿ ಕಾರ್ಯಕರ್ತೆ ಮನೆಗೆ ಸೇರಿತು ಮಕ್ಕಳ ಮೊಟ್ಟೆ: ಗ್ರಾಮಸ್ಥರ ಆಕ್ರೋಶಬೀರೂರು, ಮಕ್ಕಳಲ್ಲಿ ಅಪೌಷ್ಟಿಕತೆ ಕಾಡಬಾರದು ಎಂಬ ಉದ್ದೇಶ ದಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪೌಷ್ಟಿಕ ಆಹಾರದಲ್ಲಿ ಮೊಟ್ಟೆಯು ಸೇರಿದೆ. ಆದರೆ ಹೋರಿ ತಿಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಬೇಕಿದ್ದ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆ ಕಳೆದ 2ವರ್ಷಗಳಿಂದ ಪುಟಾಣಿ ಮಕ್ಕಳಿಗೆ ನೀಡದೆ ವಂಚಿಸಿರುವ ಪ್ರಕರಣವನ್ನು ಗ್ರಾಮಸ್ಥರು ಬೆಳಕಿಗೆ ತಂದಿದ್ದಾರೆ.