ಚಿರತೆಗಳನ್ನು ಹಿಡಿಯಲು ಆಗ್ರಹಿಸಿ ಎಮ್ಮೇದೊಡ್ಡಿ ಗ್ರಾಮಸ್ಥರ ಪ್ರತಿಭಟನೆಕಡೂರು, ಚಿರತೆಗಳನ್ನು ಹಿಡಿಯಲು ಕೂಡಲೆ ಕ್ರಮ ವಹಿಸಬೇಕು ಮತ್ತು ಇಲ್ಲಿಗೆ ಚಿರತೆಗಳನ್ನು ತಂದು ಬಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿರತೆ ದಾಳಿಗೆ ಒಳಗಾದ ಸಂತ್ರಸ್ತ ರೈತರೊಂದಿಗೆ ತಾಲೂಕಿನ ಎಮ್ಮೇದೊಡ್ಡಿ ಭಾಗದ ಗ್ರಾಮಸ್ಥರು ಕಡೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.