ಜಾತಿ ಕಳ್ಳತನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ಸಿ.ಟಿ. ರವಿಚಿಕ್ಕಮಗಳೂರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಕಳ್ಳತನ ಮಾಡುತ್ತಿದೆ. ಜಾತಿ ಕಳ್ಳತನ ಎನ್ನುವುದೇ ಹೊಸದು. ರಾಹುಲ್ ಗಾಂಧಿ ಅವರ ಸಹಮತಿ ಮೇರೆಗೆ ರಾಜ್ಯದಲ್ಲಿ ಜಾತಿ ಕಳ್ಳತನ ನಡೆಯುತ್ತಿದೆಯೇ ಅಥವಾ ರಾಹುಲ್ ಗಾಂಧಿಯವರೇ ಜಾತಿ ಕಳ್ಳತನದ ರೂವಾರಿಗಳೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.