ಭದ್ರಾ ಅಭಯಾರಣ್ಯದ ಬಫರ್ ಝೋನ್ ವಿಸ್ತರಣೆಚಿಕ್ಕಮಗಳೂರು, ರಾಷ್ಟ್ರಪ್ರಾಣಿ ಹುಲಿ ಆವಾಸಸ್ಥಾನದ ರಕ್ಷಣೆ ಕುರಿತು ಮಹತ್ವಕಾಂಕ್ಷಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಭದ್ರಾ ಹುಲಿ ಮೀಸಲು ಅರಣ್ಯದ ಬಫರ್ ಝೋನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 10,000 ಎಕರೆ ಸಂರಕ್ಷಿತ ಅರಣ್ಯ ಪ್ರದೇಶ ಭದ್ರಾ ಬಫರ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ.