ಶೃಂಗೇರಿ ಶಾರದೆಗೆ ರಾಜರಾಜೇಶ್ವರಿ ಅಲಂಕಾರಶೃಂಗೇರಿಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದ್ದು ಧಾರ್ಮಿಕ, ಸಾಂಸ್ಕೃತಿಕ ಕಲರವ ಕಳೆಗಟ್ಟಿದೆ. ನವರಾತ್ರಿ ಆರಂಭದಿಂದಲೂ ಮಳೆರಾಯ ಶೃಂಗೇರಿ ಬಿಟ್ಟು ಕದಲದಿದ್ದರೂ ದೇಶದ ನಾನಾ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಲೆ ಇದೆ. ಶ್ರೀ ಶಾರದಾಂಬಾ ದೇವಾಲಯ, ಶ್ರೀ ಶ್ರೀಮಠದ ಆವರಣ, ನರಸಿಂಹವನ,ಬೋಜನಾ ಶಾಲೆ, ಶೃಂಗೇರಿ ಪಟ್ಟಣ ಹೀಗೆ ಎಲ್ಲೆಂದರಲ್ಲಿ ಜನಜಂಗುಳಿಯೇ ಹಬ್ಬಕ್ಕೆ ಕಳೆತಂದಿದೆ.