ವಿದ್ಯಾದೇವತೆಯಾಗಿ ಅನುಗ್ರಹಿಸಿದ ಶಾರದೆಶೃಂಗೇರಿ, ಶರನ್ನವರಾತ್ರಿ ಮಹೋತ್ಸವದ 8ನೇ ದಿನವಾದ ಸೋಮವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಾಡಿದ್ದ ವಿದ್ಯಾದೇವತೆ ಸರಸ್ವತಿ ಕೈಯಲ್ಲಿ ವೀಣೆ ಹಿಡಿದು ಭಕ್ತರನ್ನು ಅನುಗ್ರಹಿಸುತ್ತಿರುವ ಅಲಂಕಾರ ನಯನ ಮನೋಹರವಾಗಿತ್ತು. ಶಾರದೆಗೆ ವಿವಿಧ ಫಲಪುಷ್ಪ, ಆಭರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಮಠದ ಪುಸ್ತಕ ಭಂಡಾರಕ್ಕೆ ವಿಶೇಷ ಪೂಜೆ ನಡೆಯಿತು.