ಭಕ್ತರ ಕಣ್ತುಂಬಿದ ಶಾರದೆಯ ವೃಷಭವಾಹಿನಿ ಅಲಂಕಾರಶೃಂಗೇರಿ, ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಕಳೆಗಟ್ಟುತ್ತಿದೆ. ದೇವಿ ಸನ್ನಿದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿಯ ದರ್ಬಾರ್, ದಿಂಡೀ ದೀಪಾರಾಧನೆ, ರಾಜಬೀದಿ ಹಾಗೂ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದೆ. ಆಗಾಗ ಸುರಿಯುತ್ತಿರುವ ಮಳೆ ಲೆಕ್ಕಿಸದೇ ಶೃಂಗೇರಿಯತ್ತ ಜನ ಸ್ತೋಮವೇ ಹರಿದು ಬರುತ್ತಿದೆ.