ಕನ್ನಡ ಭಾಷಾ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಾಗಾರ: ರವಿ ದಳವಾಯಿತರೀಕೆರೆ, ಕನ್ನಡ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೀಪದ ರಂಗೇನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ಇದೇ 29 ಮತ್ತು 30 ರಂದು ಆಯೋಜನೆಗೊಂಡಿರುವುದು ತರೀಕೆರೆಗೆ ಹೆಮ್ಮೆ ತಂದಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ತಿಳಿಸಿದ್ದಾರೆ.