ಶೃಂಗೇರಿ 100 ಬೆಡ್ ಆಸ್ಪತ್ರೆ ಕಾಣೆಯಾಗಿದೆ: ಹುಡುಕಿ ಕೊಟ್ಟವರಿಗೆ ಸರ್ಕಾರದಿಂದ ಬಹುಮಾನಶೃಂಗೇರಿ, ತಾಲೂಕಿನಲ್ಲಿ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಮತ್ತು ಜಾಗ ಮಂಜೂರಾತಿಗೆ ಒತ್ತಾಯಿಸಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಶೃಂಗೇರಿ ಜನ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು 2007ರ ಬಜೆಟ್ ನಲ್ಲಿ ಮಂಜೂರಾತಿ ದೊರೆತು ₹27 ಕೋಟಿ ಮಂಜೂರಾಗಿತ್ತು. ಆದರೆ ಕಳೆದ 3 ಬಜೆಟ್ ನಲ್ಲಿ ಪ್ರಸ್ತಾವನೆಯಾಗಿದ್ದ ಆಸ್ಪತ್ರೆ ವಿಚಾರ ಈ ಬಾರಿ ಬಜೆಟ್ ನಲ್ಲಿ ಇರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬ್ಯಾನರ್ ಮೂಲಕ ಆಕ್ರೋಶ ಹೊರಕಾಕಿದ್ದಾರೆ.