ಮಹಿಳೆಯರ ಶೋಷಣೆ ತಡೆಯಬೇಕು: ನ್ಯಾ. ಹನುಮಂತಪ್ಪಚಿಕ್ಕಮಗಳೂರುಮಹಿಳೆಯರು ಅಬಲರು, ಅವರು ಪ್ರತಿರೋಧ ಒಡ್ಡುವುದಿಲ್ಲ. ಅಂತಹವರಿಗೆ ಹಣ ಮತ್ತು ಉದ್ಯೋಗದ ಆಮಿಷ ಒಡ್ಡಿ, ಅವರನ್ನು ಕರೆದುಕೊಂಡು ಹೋಗಿ, ಜೀತ ಪದ್ಧತಿ ಅಥವಾ ಲೈಂಗಿಕ ಶೋಷಣೆಗೆ ಒಳಪಡಿಸುವ ಹೀನ ಕೃತ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.