ತರೀಕೆರೆ: ಕುಡಿವ ನೀರಿನ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರತರೀಕೆರೆ, ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರು ಸರಬರಾಜು ಸಮಸ್ಯೆ ಇಂದು, ನಿನ್ನೆ, ಮೊನ್ನೆಯದಲ್ಲ. ಹಲವು ದಶಕಗಳಿಂದ ಈ ಸಮಸ್ಯೆ ನಿರಂತರವಾಗಿ ನಾಗರಿಕರನ್ನು ಕಾಡುತ್ತಿದೆ. ಕುಡಿಯುವ ನೀರಿನ ಬವಣೆಗೆ ಬೇಸಿಗೆಯೇ ಬರಬೇಕೆಂದೇನಿಲ್ಲ, ವರ್ಷದ ಯಾವ ತಿಂಗಳಿನಲ್ಲೂ ಈ ಸಮಸ್ಯೆಗೆ ಪರಿಹಾರ ದೊರೆತಿಲ್ಲ, ತರೀಕೆರೆ ಮಟ್ಟಿಗೆ ಮಾತ್ರ ಈ ಸಮಸ್ಯೆ ಈವರೆಗೂ ಜೀವಂತವಾಗಿಯೇ ಇದೆ.