ಮೋದಿ ಪ್ರಧಾನಿಯಾದ ಮೇಲೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ: ಆರಗ ಜ್ಞಾನೇಂದ್ರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ಉಗ್ರರು ಕಲ್ಲು ಹೊಡೆಯುತ್ತಿದ್ದರು. ಆದರೆ, 2014ರ ಲ್ಲಿ ಮೋದಿ ಪ್ರಧಾನಿಯಾದ ಮೇಲೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿ ಕಲ್ಲು ಹೊಡೆದವರ ಮೇಲೆ ಗುಂಡು ಹೊಡೆಯಿರಿ ಎಂದು ತಾಕತ್ತಿನ ನಾಯಕತ್ವ ಪ್ರದರ್ಶಿಸಿದರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.