ಶಾಂತಿಯುತ ಚುನಾವಣೆಗೆ ಪೂರಕ ಸಿದ್ಧತೆಇಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆಗೆ ಗುರುವಾರ ಪೂರಕ ಸಿದ್ಧತೆಗಳು ನಡೆದವು. ಕ್ಷೇತ್ರದಲ್ಲಿ ಪುರುಷ ಮತದಾರರು 1,03774, ಮಹಿಳಾ ಮತದಾರರು 1,04474 ಹಾಗು ಇತರೆ 5 ಸೇರಿದಂತೆ ಒಟ್ಟು 2,08253 ಮತದಾರರು ಇದ್ದಾರೆ.