ಶೃಂಗೇರಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯ, ಸಿಬ್ಬಂದಿಯೇ ಇಲ್ಲ ಶೃಂಗೇರಿ, ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದೆ. ಸುಣ್ಣಬಣ್ಣ ಸಹಿತ ಸುತ್ತಮುತ್ತಲು ಉತ್ತಮ ಸ್ವಚ್ಛ ವಾತಾವರಣವಿದೆ. ಇಂಟರ್ ಲಾಕ್ ಅಳವಡಿಸಲಾಗಿದೆ. ಸುಮಾರು 30 ಬೆಡ್ ಗಳಿದ್ದು ಎಲ್ಲಾರೀತಿಯ ಮೂಲಭೂತ ಸೌಕರ್ಯಗಳಿವೆ. ಎಕ್ಸರೆ, ಆಕ್ಸಿಜನ್ ಘಟಕ, ಔಷದಿ ಸಾಮಗ್ರಿಗಳು, ಸಹಿತ ಎಲ್ಲಾ ಮೂಲ ಸೌಕರ್ಯಗಳಿದ್ದರೂ ಅಗತ್ಯ ವೈದ್ಯ, ಸಿಬ್ಬಂದಿಯೇ ಇಲ್ಲದೇ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಬೃಹತ್ ಸಮಸ್ಯೆ ಕಾಡುತ್ತಿದೆ. ಇದು ವೈದ್ಯ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ತಾಲೂಕಿನ ಕೇಂದ್ರ ಬಿಂದುವಾದ ತಾಲೂಕು ಸಾರ್ವಜನಿಕ ಆಸ್ಪತ್ರೆ ದುಸ್ಥಿತಿ.