ಪ್ರೀತಿ, ಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್: ಪೌಲ್ ಡಿಸೋಜಾಬಾಳೆಹೊನ್ನೂರು, ಜಗತ್ತಿಗೆ ಪ್ರೀತಿ, ಶಾಂತಿ ಸಂದೇಶ ಸಾರುವ ಹಬ್ಬ ಕ್ರಿಸ್‌ಮಸ್ ಆಗಿದೆ ಎಂದು ಪಟ್ಟಣದ ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ ಹೇಳಿದರು. ಪಟ್ಟಣದ ವಿಜಯಮಾತೆ ಚರ್ಚ್ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಬುಧವಾರ ವಿಶೇಷ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಕ್ರಿಸ್ತರ ಜನನ ಕಾಲಘಟ್ಟದಲ್ಲಿ ಅವರ ಜೀವನವೇ ವಿಶೇಷ. ಶೋಷಿತರು, ಬಡವರ ಒಳಿತಿಗಾಗಿ ದೇವರಾಗಿ ಬಂದವರು ಎಂದರು.