29ಕ್ಕೆ ಕುವೆಂಪು ಜನ್ಮ ದಿನಾಚರಣೆ: ಬಿ.ಬಿ. ನಿಂಗಯ್ಯ ಚಿಕ್ಕಮಗಳೂರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಬೌದ್ಧ ಮಹಾಸಭಾ ಸಹಯೋಗದಲ್ಲಿ ಡಿ. 29ರಂದು ಮಧ್ಯಾಹ್ನ 2.30ಕ್ಕೆ ತೇಗೂರಿನ ಗಿರಿಧಾಮ ಬುದ್ಧ ವಿಹಾರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಮುಖ್ಯಸ್ಥ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.